ಸನ್ಮಾನ್ಯ ಶ್ರೀಮತಿ ಬಿ.ಎಸ್. ಭಾರತಿ ಶ್ರೀಮಠದ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಧಾರವಾಡ ಜಿಲ್ಲಾ ಧಾರವಾಡ ಇವರ ಅಭಿನಂದನಾ ಸಮಾರಂಭ
Date : 15-05-2026
ಶಿವಾವತಾರಿ ಜಗದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಶ್ರೀಮಠದಲ್ಲಿ ಸನ್ಮಾನ್ಯ ಶ್ರೀಮತಿ ಬಿ.ಎಸ್.ಭಾರತಿ, ಶ್ರೀಮಠದ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಧಾರವಾಡ ಜಿಲ್ಲಾ ಧಾರವಾಡ ಇವರಿಗೆ ಅಭಿನಂದನಾ ಸಮಾರಂಭವು ದಿನಾಂಕ:-೧೫-೦೫-೨೦೨೬ ರಂದು ಸಾಯಂಕಾಲ:-೦೭-೦೦ ಘಂಟೆಗೆ ನೆರವೇರಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಾ ಶ್ರೀಮಠದ ಸೇವೆ ಸಲ್ಲಿಸಲಿಕ್ಕೆ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವಾಗಿದೆ, ಸಿದ್ಧಾರೂಢರನ್ನು ನೆನೆದರೆ ಸಾಕು ನಮ್ಮ ಕಷ್ಟಗಳು ಕ್ಷಣಾರ್ದದಲ್ಲಿ ನಿವಾರಣೆಯಾಗುತ್ತವೆ, ಶ್ರೀಮಠದಿಂದ ಭಕ್ತರಿಗೆ, ಸಾರ್ವಜನಿಕರಿಗೆ ಅನುಕೂಲವಾಗುವ ಸೌಕರ್ಯಗಳನ್ನು ಟ್ರಸ್ಟ್ ಕಮೀಟಿಯು ಮಾಡಿಕೊಡುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂದು ತಮ್ಮ ಹಿತ ನುಡಿಗಳನ್ನು ನುಡಿದರು. ಕಾರ್ಯಕ್ರಮದ ದಿವ್ಯಸನ್ನಿದಾನವನ್ನು ಶ್ರೋ.ಬ್ರ.ಸದ್ಗುರು ಶ್ರೀ ದಯಾನಂದ ಸರಸ್ವತಿ ಮಹಾಸ್ವಾಮಿಗಳು, ಶ್ರೀ ಪೂರ್ಣಾನಂದ ಆಶ್ರಮ, ಕಾಡರಕೊಪ್ಪ ಇವರು ವಹಿಸಿದ್ದರು. ಅಧ್ಯಕ್ಷತೆಯನ್ನು ಶ್ರೀಮಠದ ಚೇರ್ಮನ್ನರಾದ ಶ್ರೀ ಬಾಳು ಟಿ. ಮಗಜಿಕೊಂಡಿ ಇವರು ವಹಿಸಿದ್ದರು.
ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು, ಧರ್ಮದರ್ಶಿಗಳಾದ ಶ್ರೀ ಅಂದಾನಪ್ಪ ಸಿ. ಚಾಕಲಬ್ಬಿ ಹಿತ ನುಡಿಗಳನ್ನು ನುಡಿದರು. ವಂದನಾರ್ಪಣೆಯನ್ನು ಧರ್ಮದರ್ಶಿಗಳಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರು ನೆರವೇರಿಸಿದರು, ಪ್ರಾರ್ಥನೆಯನ್ನು ಶ್ರೀ ಸದಾನಂದ ಬೆಂಡಿಗೇರಿ ನೆರವೇರಿಸಿದರು, ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯಕ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಗೌರವ ಕಾರ್ಯದರ್ಶಿಗಳಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಶ್ರೀ ಕೆ.ಎಲ್.ಪಾಟೀಲ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ವಸಂತ ವಾಯ್. ಸಾಲಗಟ್ಟಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀ ವಿ.ಡಿ.ಕಾಮರಡ್ಡಿ ಉಪಸ್ಥಿತರಿದ್ದರು.